ಮಾಸಿ ಹೋಗುತ್ತಿರುವ ಅಜ್ಜಿ ಕಥೆಗಳ ವಿಷಯವನ್ನು ಇಟ್ಟುಕೊಂಡು ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಅಜ್ಜ ಅಜ್ಜಿಯರು ತಲೆತಲಾಂತರದಿಂದ ಹೇಳುತ್ತಿದ್ದ ಜಾನಪದ ನೀತಿ ಕಥೆಗಳೆಲ್ಲವನ್ನು ಅವರಿಂದಲೇ ಹೇಳಿಸಿ, ಆ ಕಥೆಗಳ ಆಧಾರದ ಮೇಲೆ ಈಗಿನ ಕಾಲಕ್ಕೆ ತಕ್ಕಂತೆ ಬದಲಾವಣೆ ತಂದು ಬರೆದಿರುವ ಕಥೆಗಳ ಕುಡಿಕೆಯೇ "ನಿಧಿ"
ನಿಧಿಯಲ್ಲಿ ಐದು ಸಣ್ಣ ಕಥೆಗಳಿವೆ. ಇವು ಚಾಮರಾಜನಗರ, ಮಂಡ್ಯ, ಉತ್ತರ ಕರ್ನಾಟಕ, ಕಂಗ್ಲೀಷ್ ಮತ್ತು ಗದ್ಯಕನ್ನಡದಂತಹ ವಿವಿಧ ಭಾಷಾ ಸೊಗಡುಗಳನ್ನೊಳಗೊಂಡ ವಿಭಿನ್ನ ಪ್ರಕಾರದ ಕಥೆಗಳಾಗಿವೆ.
Buy Your Nidhi Via Whatsappಈ ವಾಟ್ಸಪ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಯ್ ಎಂದು ಮೆಸೇಜ್ ಕಳುಹಿಸಿ. ನಮ್ಮ ತಂಡ ನಿಮ್ಮನ್ನು ಸಂಪರ್ಕಿಸುತ್ತಾರೆ ಪುಸ್ತಕವನ್ನು ಅಂಚೆಯ ಮೂಲಕ ನಿಮ್ಮ ಮನೆಗೆ ತಲುಪಿಸುತ್ತಾರೆ.
ಮೂಲತಃ ಸಕಲೇಶಪುರ ತಾಲೂಕಿನ ಹನಸೆ ಊರಿನವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಿ.ಕಾಂ ಪದವೀಧರರಾದ ಇವರು ನಂತರ ತೊಡಗಿಕೊಂಡದ್ದು ರಂಗಭೂಮಿ ಮತ್ತು ಸೀರಿಯಲ್ ಸಿನಿಮಾಗಳಲ್ಲಿ. ಬೆಂಗಳೂರಿನ 'ದೃಶ್ಯ' ರಂಗ ತಂಡದಲ್ಲಿ ತೊಡಗಿಕೊಂಡು ವಿವಿಧ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ನಂತರ ಕೆಲವು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ಪ್ರಸ್ತುತ 'ರತ್ನ ಪಿಕ್ಚರ್ಸ್' ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ 'ಇಲ್ಲೀಗಲ್' ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ..
Illeagle